ಗೃಹ ಲಕ್ಷ್ಮೀ ಯೋಜನೆ ಜಾರಿ, ಆನ್‌ಲೈನ್ ಅರ್ಜಿ ಆಹ್ವಾನ | Gruha lakshmi Scheme Apply Online Karnataka 2023
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಆಧಾರ್ ಕಾರ್ಡ್ ಗೆ ಬ್ಯಾಂಕ್ ಮ್ಯಾಪಿಂಗ್ ಕಡ್ಡಾಯ. ಆನ್‌ಲೈನ್ ಮೂಲಕವೇ ಲಿಂಕ್ ಮಾಡಿ, ಇಲ್ಲ ಅಂದ್ರೆ 2000 ಹಣ ಸಿಗಲ್ಲ!
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಆಧಾರ್ ಕಾರ್ಡ್ ಗೆ ಬ್ಯಾಂಕ್ ಮ್ಯಾಪಿಂಗ್ ಕಡ್ಡಾಯ.
ಹೌದು,ಕರ್ನಾಟಕದ ಹೊಸ ಸರ್ಕಾರ ಕೊಟ್ಟ ಮಾತಿನಂತೆ 5 ಗ್ಯಾರಂಟಿಗಳನ್ನು ಜಾರಿ ಮಾಡಿದೆ.ಅದರಲ್ಲು ಗೃಹ ಲಕ್ಷ್ಮೀ ಯೋಜನೆಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಜೂನ್ 15 ರಿಂದ ಜುಲೈ 15ರ ಸಮಯ ನೀಡಲಾಗುತ್ತದೆ.
ಬಹುತೇಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದು ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಆಧಾರ್ ಕಾರ್ಡಿಗೆ ಡಿ ಬಿ ಟಿ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ ಈ ಕುರಿತು ಬಹುತೇಕ ಮಹಿಳೆಯರಿಗೆ ತಿಳಿದಿಲ್ಲ ಮತ್ತು ಯಾರೂ ಕೂಡ ಈ ಮಾಹಿತಿಯನ್ನು ಮಹಿಳೆಯರಿಗೆ ನೀಡುವ ಕೆಲಸವನ್ನು ಕೂಡ ಮಾಡುತ್ತಿಲ್ಲ. ಆದರೆ ನಾವು ನಿಮಗೆ ಈ ಕುರಿತು ಮಾಹಿತಿಯನ್ನು ತಿಳಿಸಲಿದ್ದೇವೆ. ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಈ ಕೆಲಸವನ್ನು ಕಡ್ಡಾಯವಾಗಿ ಚಾಚು ತಪ್ಪದೆ ಪಾಲಿಸಲೇಬೇಕು ಇಲ್ಲವಾದಲ್ಲಿ ನಿಮ್ಮ ಗ್ರಹಲಕ್ಷ್ಮಿ ಯೋಜನೆ ಯ 2000 ಹಣ ಬ್ಯಾಂಕ್ ಖಾತೆಗೆ ಬರುವುದಿಲ್ಲ.
ಹೌದು ಆಧಾರ್ ಕಾರ್ಡ್ ಬಹಳಷ್ಟು ಜನ ಹೊಂದಿದ್ದೀರಾ ಹಾಗೂ ಸರ್ಕಾರವು ಕೂಡ ಯಾವುದೇ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿಯ ಷರತ್ತುಗಳಿಲ್ಲದೆ ಎಲ್ಲ ಮಹಿಳೆಯರಿಗೂ ಕೂಡ ಗೃಹಲಕ್ಷ್ಮಿ ಯೋಜನೆ 2000 ಹಣ ನೀಡಲು ಮುಂದಾಗಿದ್ದು, ಈ ಬೆನ್ನಲ್ಲೇ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣವನ್ನು ನೀವು ಪಡೆಯುವ ಮುನ್ನ ನಿಮ್ಮ ಆಧಾರ್ ಕಾಡಿಗೆ ಡಿಬಿಟಿ ಲಿಂಕ್ ಆಗಿದೆಯಾ ಇಲ್ಲವಾ ಎಂಬುದನ್ನು ತಿಳಿದುಕೊಳ್ಳುವುದು ಸೂಕ್ತವಾಗಿದೆ.
ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿಯ ಷರತ್ತುಗಳಿಲ್ಲದೆ ಎಲ್ಲ ಮಹಿಳೆಯರಿಗೂ ಕೂಡ ಗೃಹಲಕ್ಷ್ಮಿ ಯೋಜನೆ 2000 ಹಣ ನೀಡಲು ಮುಂದಾಗಿದ್ದು, ಈ ಬೆನ್ನಲ್ಲೇ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣವನ್ನು ನೀವು ಪಡೆಯುವ ಮುನ್ನ ನಿಮ್ಮ ಆಧಾರ್ ಕಾಡಿಗೆ ಡಿಬಿಟಿ ಲಿಂಕ್ ಆಗಿದೆಯಾ ಇಲ್ಲವಾ ಎಂಬುದನ್ನು ತಿಳಿದುಕೊಳ್ಳುವುದು ಸೂಕ್ತವಾಗಿದೆ.
ಡಿ ಬಿ ಟಿ ಎಂದರೇನು!
ಡಿ ಬಿ ಟಿ ಎಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸರ್ ಎಂದರ್ಥ. ಇದನ್ನು ಜಾರಿಗೆ ತರುವ ಮುಖ್ಯ ಉದ್ದೇಶ ಮಹಿಳೆಯರ ಅಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುವ ಉದ್ದೇಶ, ಯಾವುದೇ ಬ್ಯಾಂಕ್ ಖಾತೆಯ ಅಕ್ರಮಗಳು ನಡೆಯದಂತೆ ತಪ್ಪಿಸಲು ಈ ಯೋಜನೆಯನ್ನು ಸರ್ಕಾರವು ಜಾರಿಗೆ ತಂದಿದ್ದು ಇದರ ಅಡಿಯಲ್ಲಿ ಈಗಾಗಲೇ ಪಿಎಂ ಕಿಸಾನ್ ಯೋಜನೆಯ ಹಣವು ಕೂಡ ವರ್ಗಾವಣೆಯಾಗುತ್ತಿದೆ, ಅದೇ ರೀತಿಯಲ್ಲಿ ಮಹಿಳೆಯರ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡ ವರ್ಗಾವಣೆ ಮಾಡಲು ಸರ್ಕಾರವು ಡಿ ಬಿ ಟಿ ಲಿಂಕನ್ನು ಕಡ್ಡಾಯಗೊಳಿಸಿದೆ, ಈ ಡಿಬಿಟಿ ಯೋಜನೆಯ ಅಡಿಯಲ್ಲಿ ನೀವು ನಿಮ್ಮ ಆಧಾರ್ ಕಾರ್ಡಿಗೆ ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಆ ಬ್ಯಾಂಕ್ ಖಾತೆಗೆ ಮಾತ್ರವಷ್ಟೇ ಸರ್ಕಾರದ ಎಲ್ಲ ಸವಲತ್ತುಗಳು ಕೂಡ ನೇರವಾಗಿ ಸಿಗಲಿದೆ, ಇಲ್ಲಿ ಯಾವುದೇ ಅಕ್ರಮಗಳು ನಡೆಯಲು ಸಾಧ್ಯವಿಲ್ಲ ಹಾಗಾಗಿ ಈ ಯೋಜನೆಯನ್ನು ಸರ್ಕಾರವು ಜಾರಿಗೆ ತಂದಿದೆ.
ನಿಮ್ಮ ಆಧಾರ್ ಕಾರ್ಡ್ ಗೆ ಡಿಬಿಟಿ ಲಿಂಕ್ ಆಗಿದೆಯಾ ಚೆಕ್ ಮಾಡಿ!
ಈಗಾಗಲೇ ಯಾರೆಲ್ಲಾ ಪಿಎಮ್ ಕಿಸಾನ್ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಾಗಿದ್ದಾರೋ ಅಂತಹವರು ಯಾವುದೇ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ನಿಮ್ಮ ಪಿಎಂ ಕಿಸಾನ್ ಯೋಜನೆಯ ಹಣ ಯಾವ ಬ್ಯಾಂಕ್ ಖಾತೆಗೆ ಬರುತ್ತಿದೆ ಅದೇ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವು ಕೂಡ ಬರಲಿದೆ ಒಂದು ವೇಳೆ ನೀವೇನಾದರೂ ಇದೇ ಮೊದಲ ಬಾರಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾದಲ್ಲಿ ನೀವು ನಿಮ್ಮ ಆಧಾರ್ ಕಾರ್ಡಿಗೆ ಡಿ ಬಿ ಟಿ ಲಿಂಕ್ ಮಾಡಿಸಬೇಕು.
No comments